Uncategorized

ಅಭಿಯಂತರ ದಿನಾಚರಣೆ – ೨೦೨೩

ಕಾರ್ಯ ನಿಮಿತ್ತವಾಗಿ ಒಂದು ಸ್ಥಳದ  ತಪಾಸಣೆಗಾಗಿ  ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಕರೆದಿದ್ದರು .  ಆಗ ಅವರು  ಸುಮಾರು ಎಪ್ಪತೈದು  ವಸಂತಗಳನ್ನು ಕಂಡರೂ  ಅವರು  ಕಾಯಕದಲ್ಲಿ  ಇಪ್ಪತೈದರ  ತರುಣರಾಗಿದ್ದರು ಸರ್ ಎಂ ವಿ.  ಅವರ ಜೊತೆಗೆ ತರುಣರಾದ ಎಂ ಆರ್ ವರದರಾಜನ್ ಅವರು  ಜೊತೆಗಿದ್ದರು.  ಆ ತಪಾಸಣೆ ಮಾಡುವ ಸ್ಥಳದ ತಸು ಎತ್ತರದಲ್ಲಿದ್ದು ಅಲ್ಲಿಯವರೆಗೆ ಹೋಗುವುದು ಶ್ರೀಗಳಿಗೆ  ಬೇಡವೆಂದು ವರದರಾಜನ್ ಅವರು ತಿಳಿಸಿ ನಾನೆ ಹೋಗಿ ನೋಡಿಕೊಂಡು ಬಂದು ತಮಗೆ ವರದಿ ಒಪ್ಪಿಸುವೆ ಎಂದು ತಿಳಿಸುತ್ತಾರೆ. 

ಆಗ ಶ್ರೀಗಳು ” ನೀವು ಏರಬಲ್ಲಿರಿ ಅಲ್ಲವೇ? ” ಎಂದು ಕೇಳಿದರು. 

ವರದರಾಜನ್ ಅವರು ನಾನು  ” ಏರಬಲ್ಲೆ ”  ಎಂದು ಉತ್ತರಿಸಿದರು. 

“ನೀವು ಏರಬಲ್ಲಿರಿ ಎಂದರೆ ನಾನು ಏಕೆ ಏರಲಾರೆ ” ಎಂದು ಹೇಳಿದರು. 

ವರದರಾಜನ್  ಅವರು ಎಷ್ಟೇ ಬೇಡ ಎಂದು ಪ್ರಾರ್ಥಿಸಿದರೂ , ಸೀದಾ ತಪಾಸಣೆ ಮಾಡಬೇಕಾದ ಸ್ಥಳ ತಲುಪಿ , ಎಲ್ಲಾ ವಿವರಗಳನ್ನು ಪಡೆದು  , ಪರಿಶೀಲನೆ ಮಾಡಿ ಟಿಪ್ಪಣಿ ಮಾಡಿಕೊಂಡು, ತಮ್ಮ ವರದಿಯನ್ನು ಸರ್ಕಾರಕ್ಕೆ ನೀಡಿದರು. 

ತಮಗೆ ವಹಿಸಿದ ಕಾರ್ಯವನ್ನು ಅವರು ಈ ಇಳಿವಯಸ್ಸಿನಲ್ಲಿ ಬೇರೆಯವರಿಗೆ ವಹಿಸಬಹುದಿತ್ತು, ಬೇರೊಬ್ಬರ ವರದಿಗೆ ಅವರು ತೃಪ್ತರಾಗದೆ ತಾವೇ ನಿಂತು ವಿವರ ಪಡೆದರು. ತಮಗೆ ವಹಿಸಿದ ಕರ್ತವ್ಯಕ್ಕೆ ಎಂದು ದ್ರೋಹ ಬಗೆಯದೇ  ಕರ್ತವ್ಯ ನಿಷ್ಠೆ ಪಾಲನೆ ಮಾಡಿದರು.

ಇಂದು ಸರ್ ಎಂ ವಿ ಅವರ ಜನ್ಮ ದಿನ, ನಾವೆಲ್ಲ ಹೆಮ್ಮೆಯಿಂದ ಅಭಿಯಂತರ ದಿನಾಚರಣೆ ಎಂದು ಆಚರಿಸುತ್ತೇವೆ, ಅವರ ಜೀವನದಲ್ಲಿ  ಪಾಲಿಸಿದ  ಹಾಗು ಸಾಧಿಸಿದ ಆದರ್ಶಪಾಲನೆನ್ನು ನಾವೆಲ್ಲ ಸ್ಮರಿಸಿ , ಜೀವನದಲ್ಲಿ ಅಳವಡಿಸಿಕೊಳ್ಳೋಣ. 

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html
ಅಭಿಯಂತರ ದಿನಾಚರಣೆ – ೨೦೨೧
http://timepassri.blogspot.com/2021/09/blog-post.html

                                                        ಅಭಿಯಂತರ ದಿನಾಚರಣೆ – ೨೦೨೨

                                           http://timepassri.blogspot.com/2022/09/blog-post.html

Uncategorized

ಅಭಿಯಂತರ ದಿನಾಚರಣೆ – ೨೦೨೨

ಅಪ್ಪ್ರೈಸಲ್ ಎನ್ನುವ ಪದ ಕಾಯಕ ಯೋಗಿಗಳಾದ ವೃತ್ತಿಪರರಿಗೆ  ಸಂವತ್ಸರ ಪೂರ್ತಿ ಬೆವರು ಹರಿಸಿ ದುಡಿಮೆಯ  ಫಲಾಪೇಕ್ಷೆ ಇಲ್ಲವೇ  ಫಲಾಪೇಕ್ಷೆಯಿಲ್ಲದ  ಪ್ರತಿಫಲ ಎಂದರೆ ತಪ್ಪಾಗಲಾರದು ಕಾಯಕವೇ ಕೈಲಾಸ ಎನ್ನುವ ನಾಣ್ಣುಡಿ ಬದಲಿಗೆ ಅಪ್ಫ್ರೈಸ್ಸಲ್ ಕೈಲಾಸ  ಎನ್ನುವ ಮಟ್ಟಿಗೆ ಅಪ್ಪ್ರೈಸಲ್ ಪದಕ್ಕೆ ಪ್ರಾಮುಖ್ಯ ನೀಡಿದ್ದಾರೆ ನಮ್ಮ ವೃತ್ತಿಪರರು. ಅಪ್ಪ್ರೈಸಲ್  ಸಂದರ್ಭದಲ್ಲಿ ವರ್ಷ  ಪೂರ್ತಿ ದುಡಿದ  ಎಲ್ಲರನ್ನೂ ಸಮಾಧಾನ ಮಾಡಲು ಆಗುವುದಿಲ್ಲ ಅದರೆ ಅವರ ಕಾರ್ಯಕ್ಕೆ ಕನಿಷ್ಠ ಮೆಚ್ಚುಗೆ ಸೂಚಿಸಿ  ನೀವು ಇನ್ನೂ ಉತ್ತಮ ಪಡಿಸಿಕೊಳ್ಳಬಹುದು ಎಂದು ಹೇಳುವವರು ಬಹಳ ವಿರಳ ಪ್ರಭಂದಕನ ಅಚ್ಚು ಮೆಚ್ಚಿನವರಿಗೆ ಒಂದಿಷ್ಟು  ಉಳಿದಿದ್ದುಅಳಿದು ಉಳಿದವರಿಗೆ ಎಂಬಂತಾಗಿದೆ ಇಂದು.

ಹಿಂದೆ ನಮ್ಮ ಕನ್ನಡನಾಡಿನಲ್ಲಿ ಮಹನೀಯರೊಬ್ಬರು ಇದ್ದರು , ಅವರ ಜೊತೆಗೆ ಕೆಲಸ ಮಾಡುವುದೇ ಒಂದು ಸೌಭಾಗ್ಯಅವರ ಶಿಸ್ತಿನ ಜೀವನವೃತ್ತಿಪರತೆ,  ಕೌಶಲ್ಯ  ಹಾಗು ಸದಾ ತಮ್ಮೊಂದಿಗೆ ಕಾಯಕದಲ್ಲಿ ತೊಡಗುವ ಶ್ರಮ ಜೀವಿಗಳ ಬಗ್ಗೆ ತೋರುವ ಗೌರವ ಮತ್ತು ಅಭಿಮಾನ  ಪ್ರತಿಯೊಬ್ಬನು ಸಹ ನಾನು ಇಂತವರ ಜೊತೆ ಕೆಲಸ ಮಾಡಬೇಕು ಎಂದು ಅನಿಸುತ್ತಿತ್ತುಅಂತಹವರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರು ಅಗ್ರಗಣ್ಯರಾಗಿ  ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.  ಸರ್ ಎಂ ವಿ ಯವರ  ವೃತ್ತಿ ಜೀವನವನ್ನು  ಆದರ್ಶವಾಗಿಟ್ಟು ಕೊಂಡ  ಹಲವರು  ತಮ್ಮ ಜೀವನವನ್ನು ತುಕ್ಕು ಹಿಡಿಯಲು  ಹೋಗದೆ ,  ಜನರ ಕಲ್ಯಾಣಕ್ಕೆ ತೇದು ಹೋದರು.  ಅಂತಹವರಲ್ಲಿ ರಾಜ ಸೇವಾಸಕ್ತ  ಡಿ ಸಿ ಸುಬ್ಬರಾಯರು  ಸಹ ಒಬ್ಬರು.

ಸರ್ ಎಂ ವಿ ಅವರ ಕಚೇರಿ ದಿನಚರಿಯು ಬೆಳಗ್ಗೆ  ಗಂಟೆಯಿಂದ ಮಧ್ಯಾಹ್ನ  ಗಂಟೆಯವರೆಗೆ  ಮಧ್ಯದಲ್ಲಿ  ಬಿಡುವು ,ಮತ್ತೆ  ಗಂಟೆಯಿಂದ ರಾತ್ರಿ  ಗಂಟೆಯವರೆಗೆಕೆಲಸ ಹೆಚ್ಚಿದ್ದರೆ ಮುಗಿಯುವವರೆಗೆ ಭಾನುವಾರ , ಹಬ್ಬ  ಹರಿದಿನವೆನ್ನದೆ ದಣಿವರಿಯದೆ ಅವಿರತವಾಗಿ ನಡೆಯುತ್ತಿತ್ತುಶ್ರೀಗಳು ತಮ್ಮ ಕಚೇರಿಗೆ ಯಾರೇ ಬಂದರು  ಬಂದವರು  ಕುರ್ಚಿಯ ಮೇಲೆ  ಕುಳಿತ ಮೇಲೆಯೇ  ತಮ್ಮ ಸಮಾಚಲೋಚನೆಯನ್ನು ಮುಂದುವರಿಸುತ್ತಿದ್ದರು .  ದಿನಕ್ಕೆ ಕನಿಷ್ಠ ಹನ್ನೊಂದು ಗಂಟೆಗಳ ಕೆಲಸ ಇಂತಹ ಸರ್ಕಾರೀ ಕೆಲಸ ದೇವರ ಕೆಲಸ ಎಂದು ಶ್ರೀಗಳ ಜೊತೆ ಅವರ ಕಚೇರಿಯ  ನಾಲ್ವರು  ಆಪ್ತ ಸಹಾಯಕರು ಕೈಜೋಡಿಸುತ್ತಿದ್ದರು.  ಅವರಲ್ಲಿ ಡಿ ಸಿ ಸುಬ್ಬರಾಯರು  ಸಹ ಒಬ್ಬರುಹೆಚ್ಚಿಗೆ ಕೆಲಸ ಮಾಡಿಸಿಕೊಂಡ ಮೇಲೆ ಅವರಿಗೆ ಹೆಚ್ಚಿನ ಸಂಬಳ ನೀಡಬೇಕು ತಾನೇ.

ತಮ್ಮ ಜೊತೆಗೆ ಹೆಚ್ಚಿನ ಸಮಯ ಕೆಲಸ  ಮಾಡಿದ ನಾಲ್ವರು  ಸಹೋದ್ಯೋಗಿಗಗಳಿಗೆ  ಹೆಚ್ಚಿನಭತ್ಯೆ ನೀಡಬೇಕೆಂದು , ತಮಗೆ ನೀಡಲು ಆಗದಿದ್ದಲ್ಲಿ ನಮ್ಮ ಸಂಬಳದಿಂದ ಮುರಿದುಕೊಳ್ಳಬಹುದೆಂದು  ಮಹಾರಾಜರಲ್ಲಿ ಪ್ರಸ್ತಾಪಿಸುತ್ತಾರೆಆಗ ಮಹಾರಾಜರು  ಉದಾರ ಮನೋಭಾವದಿಂದ ಸರ್ಕಾರದ ವತಿಯಿಂದ  ನಾವು ನೀಡುತ್ತೇವೆ ಎಂದು ಶ್ರೀಗಳ ಮನವಿಯನ್ನು ಗೌರವಪೂರ್ವಕವಾಗಿ  ಪುರಸ್ಕರಿಸುತ್ತಾರೆ.

ಇದಲ್ಲದೆ ತಮ್ಮ ಜೊತೆ ಅತ್ಯಂತ ದಕ್ಷವಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಸಿಗಬೇಕಾದ ಗೌರವನ್ನು ಹಾಗು ಪುರಸ್ಕಾರವನ್ನುಅಗತ್ಯ ಬಿದ್ದಲ್ಲಿ ಅವರಿಗೆ ಕೆಲಸದಲ್ಲಿ ಬಡ್ತಿಯನ್ನು ನೀಡಿ ಇಲ್ಲವೇ ಶಿಫಾರಸು ಮಾಡಿ  ಹೆಚ್ಚು ದಕ್ಷತೆಯಿಂದ ಕಾಯಕದಲ್ಲಿ ತೊಡಗುವಂತೆ ಮಾಡುವುದು ಅವರ ವೃತ್ತಿ ಧರ್ಮವಾಗಿತ್ತು .

ಅಂದು ಸರ್ ಎಂ ವಿಶ್ವೇಶ್ವರಯ್ಯನವರು ಪಾಲಿಸುತ್ತಿದ್ದ ವೃತ್ತಿಧರ್ಮವನ್ನು ಅವರ ಸಹೋದ್ಯೋಗಿಗಳು ಸಹ ಪಾಲಿಸಿ ತಮ್ಮ ವೃತ್ತಿ ಧರ್ಮದಲ್ಲಿ ಅಳವಡಿಸಿಕೊಂಡರುಕಾಲಕಳೆದಂತೆ  ಕಾಲಚಕ್ರದಲ್ಲಿ ಬಹುಶ  ವೃತ್ತಿ ಪರತೆಯ ಕೊಂಡಿ ಬೇರ್ಪಟ್ಟಂತೆ ಕಂಡಿತೇ.  ಎಲ್ಲೋ  ಇಂದಿನ ವೃತ್ತಿಪರರು ಸಹ  ಸರ್ ಎಂ ವಿ ಯವರ ವೃತ್ತಿಪರತೆಯನ್ನು ಅಗತ್ಯವಾಗಿ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಎದ್ದು ಕಾಣುವಂತೆ ಭಾಸವಾಗುತ್ತಿದೆ.

ಇಂದು ಸೆಪ್ಟೆಂಬರ್ ೧೫  ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನನಾವು  ಅಭಿಯಂತರ ದಿನಾಚರಣೆಯಾಗಿ ಆಚರಿಸುತ್ತೇವೆಹಾಗಾಗಿ ಕೇವಲ ಅಭಿಯಂತರ ದಿನ ಎಂದು ಆಚರಿಸದೆ ನಾವು ವೃತ್ತಿ ಪರರ ದಿನ ಎಂದು ಅವರ ಹಾಕಿಕೊಟ್ಟ ವೃತ್ತಿ ಧರ್ಮವನ್ನು ಪಾಲಿಸಿ ಕೊಂಡು ಹೋಗುವ ಅಗತ್ಯವಿದೆ.

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html
ಅಭಿಯಂತರ ದಿನಾಚರಣೆ – ೨೦೨೧
http://timepassri.blogspot.com/2021/09/blog-post.html

Uncategorized

ಅಭಿಯಂತರ ದಿನಾಚರಣೆ – ೨೦೨೧

ಒಮ್ಮೆ ಸರ್ ವಿಠಲದಾಸ್ ಥ್ಯಾಕರ್ಸ್ ಅವರ ತಮ್ಮನವರು  ಕಾರ್ಯನಿಮ್ಮಿತ್ತ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹಾಗಾಗಿ  ಅವರನ್ನು ನೋಡಿಕೊಳ್ಳಬೇಕೆಂದು, ಅವರಿಗೆ ಒಂದು ಬಂಗಲೆಯಲ್ಲಿ ವಸತಿಗೆ ವ್ಯವಸ್ಥೆ ಮಾಡಬೇಕೆಂದು ಲೇಡಿ ಥ್ಯಾಕರ್ಸ್ ಅವರು ಅವರ ಆತ್ಮೀಯರಾದ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಪತ್ರವನ್ನು ಬರೆಯುತ್ತಾರೆ. ವಿಶ್ವೇಶ್ವರಯ್ಯನವರು ಮೊದಲೇ ಮೈಸೂರಿನ ದಿವಾನರಾದವರು ಹಾಗಾಗಿ ಅವರನ್ನು  ಅತ್ಯಂತ ಕಾಳಜಿಯಿಂದ   ಸರ್ ವಿಠಲದಾಸ್ ಥ್ಯಾಕರ್ಸ್  ಅವರ ತಮ್ಮನವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರನ್ನು ಪುಣೆಗೆ ಬೀಳ್ಕೊಡುತ್ತಾರೆ. ಲೇಡಿ  ಥ್ಯಾಕರ್ಸ್ಆ ಅವರು ವಿಶ್ವೇಶ್ವರಯ್ಯನವರ ಕೈಯ್ಯಲ್ಲಿ ಸರ್ಕಾರವೇ ಇದೆ ಹಾಗಾಗಿ ಯಾವುದು ಒಂದು ಸರ್ಕಾರದ ಬಂಗಲೆ ಒದಗಿಸಿರುತ್ತಾರೆ ಎಂದು ಕೊಂಡು ಸುಮ್ಮನಾಗಿದ್ದರು. ಆದರೆ ಹಲವು ವರ್ಷಗಳ ನಂತರ ಅವರಿಗೆ ತಿಳಿಯಿತು. ಸರ್ಕಾರೀ ಬಂಗಲೆಯನ್ನು ಸಹ ಬಾಡಿಗೆಗೆ ತಗೆದುಕೊಂಡು, ಆ ಬಾಡಿಗೆಯನ್ನು ಸಹ ತಮ್ಮ ಕೈಯಿಂದ ಕೊಟ್ಟಿದ್ದರೆಂಬ ಸಂಗತಿ. 

ನಾವು ಅಧಿಕಾರದಲ್ಲಿರುವ  ಹಲವಾರು ವರ್ಗಗಳನ್ನು ನೋಡಿರ್ತೀವಿ, ಅವರಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿರೋವವರೇ ಹೆಚ್ಚನ್ನು ಸಾಕ್ಷಾತ್ಕರಿಸಿರುತ್ತೇವೆ, ನಾವು ಸಹ ಕೆಲವೊಂದು ಕಡೆನೂ ಎಡುವಿರುತ್ತೇವೆ. ಇಂದು ಸೆಪ್ಟೆಂಬರ್ ೧೫ ಸರ್ ಎಂ ವಿ ಅವರ ಜನ್ಮ ದಿನ ನಾವೆಲ್ಲ ಅಂದರೆ ಭಾರತೀಯರು ‘ಅಭಿಯಂತರ ದಿನಾಚರಣೆ’  ಅಂತ ಆಚರಿಸುತ್ತೇವೆ . ಇಂದಾದರೂ ಇಲ್ಲವೇ ಮುಂದಾದರೂ ಸರ್ ಎಂ ವಿಶ್ವೇಶ್ವರಯ್ಯನವರು ಆದರ್ಶಗಳನ್ನು ಸ್ವಲ್ಪನಾದರೂ ಪಾಲನೆಮಾಡೋಣ.

ಲೇಡಿ ಥಾಕರ್ಸ್ ಅವರ ಬಗೆಗಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಸ್ಪರ್ಶಿಸಿ 

https://en.wikipedia.org/wiki/Vithaldas_Thackersey

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html

ಚುನಾವಣೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯ

ನಾಯಕರಿಗೊಂದು ದಿಕ್ಸೂಚಿ…

ಸ್ವತಂತ್ರ ಪೂರ್ವದ ಹಿಂದೆ ನಡೆದ ಘಟನೆ, 
ಮುಂಬೈ ನಗರದ ರೈಲ್ವೆ ನಿಲ್ದಾಣ, ಬೆಂಗಳೂರಿನಿಂದ ರೈಲು ಬಂದು ನಿಂತಿತ್ತು. ಮೈಸೂರಿನ ದಿವಾನರಾದ  ಮಾಧವರಾಯರು ಕಾರ್ಯನಿಮಿತ್ತವಾಗಿ ದೆಹಲಿಗೆ ಹೊರಟಿದ್ದರು. ಮುಂಬೈ ರೈಲ್ವೆ ನಿಲ್ದಾಣದಲ್ಲಿ  ದೆಹಲಿಗೆ ಹೋಗಲು ರೈಲನ್ನು ಬದಲಿಸಬೇಕಿತ್ತು. ದೆಹಲಿಗೆ ಹೊರಡುವ ರೈಲು ಇನ್ನು ಬಂದಿರಲಿಲ್ಲ ಸುಮಾರು ೫ ಘಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ಆಗ ಮೈಸೂರಿನ ದಿವಾನರು ಬದಲಿ ರೈಲು ಬರುವ ಒಳಗೆ ಪೇಟೆ ಸುತ್ತಿ ಬರುವ ಯೋಚನೆ ಮಾಡಿ ಹೊರಟು ಹೋದರು.
ಮೈಸೂರಿನ ದಿವಾನರ ಪ್ರಯಾಣವನ್ನು ಪತ್ರಿಕೆಯ ಮೂಲಕ ಅರಿತಿದ್ದ, ಸುಮಾರು ೮೨ ವರ್ಷದ ವ್ಯಕ್ತಿಯೊಬ್ಬರು ದಿವಾನರನ್ನು ಕಾಣಲು ಬಂದರು. ಅವರಿಗೆ ದಿವಾನರು ಇಲ್ಲದಿರುವುದು  ಅವರ ಆಪ್ತಕಾರ್ಯದರ್ಶಿಯಿಂದ ತಿಳಿಯಿತು.  ಅ ೮೨ ವರ್ಷದ ವ್ಯಕ್ತಿಯನ್ನು ಗುರುತಿಸಿದ  ದಿವಾನರ ಆಪ್ತಕಾರ್ಯದರ್ಶಿ ಅವರನ್ನು ದಿವಾನರ ಬೋಗಿಯೊಳಗೆ ಕುಳಿತು ಕೊಳ್ಳಲು ಮನವಿ ಮಾಡಿದರು. 
” ದಿವಾನರು ಇಲ್ಲದಾಗ ಅವರ ಕೋಣೆಯನ್ನು ಪ್ರವೇಶಿಸುವುದು ಉಚಿತವಲ್ಲ ” ಎಂದು ಹೇಳಿ  ನಯವಾಗಿ ತಿರಸ್ಕರಿಸಿದರು ಅ ಹಿರಿಯರು. 
ದಿವಾನರು ದೆಹಲಿಗೆ ಹೊರಡುವ ಮುನ್ನ ಆಂಗ್ಲರ ನೀತಿಯನ್ನು ದಿಕ್ಕರಿಸಿದ ಮೈಸೂರಿನ ಜನತೆ , ಅಂಗ್ಲರ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಅಂಚೆ ಕಛೇರಿಗೆ ಬೆಂಕಿ ಹಚ್ಚಿದ್ದರು , ರೈಲ್ವೆ ಕಂಬಿ ಕಿತ್ತರು ,  ಪ್ರತಿಭಟನೆ ಇನ್ನಷ್ಟು  ಉಗ್ರವಾಯಿತು. ಅಗ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡು ಹಾರಿಸಿದರು, ಹಲವಾರು ನಾಗರೀಕರು ಪ್ರಾಣ ತೆತ್ತರು.   
ಇದರ ಸಲುವಾಗಿ ಅ ಹಿರಿತೆಲೆ ದಿವಾನರ ಹತ್ತಿರ ಮಾತನಾಡಲು ಬಂದಿದ್ದರು.
ದಿವಾನರು ಆಪ್ತ ಕಾರ್ಯದರ್ಶಿಯವರು ಹಿರಿಯರ ಯೋಗಕ್ಷೇಮ ವಿಚಾರಿಸಿದರು, ನಂತರ ಮಾತುಕತೆ ರಾಜ್ಯದ ಈಗಿನ ಪರಿಸ್ಥಿತಿಯ ಕಡೆಗೆ ಹೊರಟಿತು.
” ಪರಿಸ್ಥಿತಿ ಹದಗೆಟ್ಟಿತ್ತು, ಬೇರೆ ದಾರಿಯಿರಲಿಲ್ಲ , ಗುಂಡು ಹಾರಿಸಲೇ ಬೇಕಾಯಿತು” ಎಂದು ಕಾರ್ಯದರ್ಶಿಗಳು ಹೇಳಿದರು.   
 ” ಮೈಸೂರಿನ ಜನ ಸೌಮ್ಯ ಸ್ವಭಾವದವರು, ಅವರು ಹೀಗೆಲ್ಲಾ ಮಾಡುವುದಿಲ್ಲ , ಸರ್ಕಾರ ಸರಿಯಾದ ಕ್ರಮ ತಗೆದು ಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ” ಎಂದು ಹೇಳಿ, ಇದು ಸರ್ಕಾರದ ತಪ್ಪು ಎಂದು ವಿಷಾದ ವ್ಯಕ್ತಪಡಿಸಿದರು ಅ ಹಿರಿಯರು. 
ಮಾತುಕತೆ ಬೇರೆ ಕಡೆ ಹೊರಳಿದ್ದನ್ನು ಅರಿತ ಆಪ್ತ ಕಾರ್ಯದರ್ಶಿಗಳು ಮಾತನ್ನು ಮುಂದುವರೆಸದಿರಲು ನಿರ್ಧರಿಸಿ. ಹಿರಿಯರಿಗೆ ದಿವಾನರ ಕೋಣೆಯ ಒಳಗೆ ಕೂರಲು ಮತ್ತೊಮ್ಮೆ ಮನವಿ ಮಾಡಿದರು. ಪ್ರಯತ್ನ ಮತ್ತೆ  ವಿಫಲವಾಯಿತು.
ನಂತರ ಅದೇ ಜಾಗದಲ್ಲಿ ಅ ಹಿರಿಯರು ತಾವು ತಂದಿದ್ದ  ಆಸ್ಟ್ರೇಲಿಯಾ ದೇಶದ ಅರ್ಥಿಕ ಮಾಸ ಪತ್ರಿಕೆಯನ್ನು  ತಗೆದು ನಿಂತು ಕೊಂಡೆ ಓದಲು ಆರಂಭಿಸಿದರು. ಸದಾ ಕಿವಿಗಡಚಿಕ್ಕುವ ಮುಂಬೈ ನಿಲ್ದಾಣ ಆದರೂ ಏಕಾಗ್ರತೆ ಮತ್ತು ಸಮಚಿತ್ತದಿಂದ ವರ್ತಮಾನ ಪತ್ರಿಕೆ ಓದುತಿದ್ದ ಹಿರಿಯರನ್ನು ಕಂಡ ದಿವಾನರ ಆಪ್ತ ಕಾರ್ಯದರ್ಶಿ ಅ ಹಿರಿಯರಿಗೆ ತೆಲೆದೊಗಿದರು. 
ಸ್ವಲ್ಪ ಸಮಯದ ನಂತರ ದೆಹಲಿಗೆ ಹೊರಡುವ ರೈಲು ಬಂತು. ದಿವಾನರಿಗೆ ಕಾಯ್ದಿರಿಸಿದ ಬೋಗಿ ಒಳಗೆ ಕುಳಿತು ಕೊಳ್ಳುವಂತೆ ಹಿರಿಯರಿಗೆ ಮಾಡಿದ ಪ್ರಯತ್ನ ಮಗದೊಮ್ಮೆ ವಿಫಲವಾಯಿತು.
ಸ್ವಲ್ಪ ಸಮಯದ ನಂತರ ದಿವಾನರು ಬಂದರು. ಹಿರಿತಲೆಯನ್ನು ಕಂಡ ದಿವಾನರು ಅ ಹಿರಿಯರನ್ನು ಆತ್ಮೀಯವಾಗಿ ಸ್ವಾಗತಿಸಿ. ತಮ್ಮ ಕೋಣೆಯೊಳಗೆ ಕರೆದು ಕೊಂಡು ಹೋದರು. ಉಭಯ ಕುಶಲೋಪರಿ ನಂತರ ಮೈಸೂರಿನ ಸ್ಥಿತಿಗತಿಗಳ ಬಗ್ಗೆ ರೈಲು ಹೊರಡುವವರೆಗೂ ಸಮಾಲೋಚನೆ ನಡೆಸಿದರು ಅ ಹಿರಿ ಜೀವ. 
ಅ ಹಿರಿ ಜೀವ ಯಾರು ಎಂದು ನಿಮಗೆ ಗೊತ್ತಾಗಿದ್ದರೆ ಅದು ನನ್ನ ಭಾಗ್ಯವೆಂದೆ ಹೇಳಬೇಕು. 
ಅ ಹಿರಿ ಜೀವ ಮತ್ತಾರು ಅಲ್ಲ  ” ಮೋಕ್ಷಗುಂಡಂ ವಿಶ್ವೇಶ್ವರಯ್ಯ “, ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮಾಧವರಾಯರು  ವಿಶ್ವೇಶ್ವರಯ್ಯನವರ ಆಪ್ತ ಕಾರ್ಯದರ್ಶಿಗಳು ಆಗಿದ್ದರು. ಅದರೂ ತಾನು ಮಾಜಿ ದಿವಾನನೆಂದು ದರ್ಪ ಮೆರೆಯಲಿಲ್ಲ. ದಿವಾನರು ಬರುವವರೆಗೂ ಅವರಿಗೆ ಗೌರವ ಸೂಚಕವಾಗಿ ನಿಂತೇ ಇದ್ದರು. ಮುಂಬೈಯಲ್ಲಿದ್ದರೂ ಸದಾ ಮೈಸೂರಿನ ಏಳಿಗೆಯನ್ನು ಬಯಸುತಿತ್ತು ಅ ಜೀವ. 
ಸಜ್ಜನಿಕೆ , ಸೌಜನ್ಯತೆ , ಗೌರವ , ದೇಶಭಕ್ತಿ , ಸಮಚಿತ್ತ ಮನಸ್ಸು ಇವೆಲ್ಲಕ್ಕೆ ಸಮಾನರ್ಥಕ ಪದವೇ ಮೋಕ್ಷಗುಂಡಂ ವಿಶ್ವೇಶ್ವರಯ್ಯ. 
ಸದಾ ವೇದಿಕೆಯ ಮೇಲೆ ನಿದ್ದೆ ಮಾಡುವ , ಕಲಾಪಕ್ಕೆ ಬರದ, ಸದನದಲ್ಲಿ  ಸನ್ನಿ ಹಿಡಿದವರಂತೆ ಬಟ್ಟೆ  ಹರಿದು ಕೊಂಡು ಪ್ರತಿಭಟಿಸುವ,  ಸದಾ ವಿರೋಧ ಪಕ್ಷ ದ  ಮೇಲೆ ಗೊಬೆ ಕೋರಿಸುವ , ಎಲುಬಿಲ್ಲದ ನಾಲಗೆಯನ್ನು ಮನಬಂದಂತೆ ತಿರುಗಿಸುವ, ತನ್ನನ್ನು ಚುನಾಯಿಸಿದ  ಕ್ಷೇತ್ರದಿಂದ ಸದಾ ದೂರ ಉಳಿದು ಚುನಾವಣೆ ಬಂದಾಗ ಕ್ಷೇತ್ರಕ್ಕೆ ಕಾಲಿಡುವ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ, ಅಧಿಕಾರಕ್ಕಾಗಿ ಮಣ್ಣು, ಜಲ, ಭಾಷೆಯನ್ನು  ಪ್ರಣಾಳಿಕೆಯಲ್ಲಿ ಸೇರಿಸಿ ಆಮೇಲೆ ಕೈ ಕೋಡುವ , ಸಮಾಜದಲ್ಲಿ ಸ್ತ್ರೀಯರನ್ನು ಮತ್ತು ಮಕ್ಕಳನ್ನು  ಗೌರವದಿಂದ ಕಾಣದ, ನೀತಿಗೆಟ್ಟ, ಲಜ್ಜೆಗೆಟ್ಟ , ದೇಶಾಭಿಮಾನವಿಲ್ಲದ  ನಾಯಕರನ್ನು ಹಿಂದೆ ನೀವು ಅರಿಸಿದ್ದಿರಿ, ಮತ್ತೊಮ್ಮೆ ತಪ್ಪು ಮಾಡಬೇಡಿ.
ಮತದಾನ ನಿಮ್ಮ ಹಕ್ಕು . ಜಾತಿ, ಹಣ ,ಹೆಂಡಕ್ಕೆ ನಿಮ್ಮನ್ನು ಮಾರಿಕೊಳ್ಳ ಬೇಡಿ. 
ಇಂತಹ ನಾಯಕರು ನಮಗೆ ಬೇಕೇ, ನಿರ್ಧರಿಸಲು ಇದು ಸಕಾಲ 
ಇನ್ನಾದರೂ ಎಚ್ಚರವಾಗು ಭವ್ಯ ಭಾರತದ ನಾಗರೀಕ.. 
ಅತ್ಯಂತ ಜಾಗರೂಕತೆಯಿಂದ ನಿನ್ನ ಮತ ಚಲಾಯಿಸು..

ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸರ್ ಮ್ ವಿ

ಕಾಯಕ ಯೋಗಿಗೊಂದು ನಮನ

ಭರತ ಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ  ಇವರನ್ನು  ಭಗೀರಥನೆನ್ನ ಬೇಕೆ?.  ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರನೆನ್ನ  ಬೇಕೆ ?.  ಭರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಅಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿರುದ್ದಿಗೆ ಶ್ರಮಿಸಿದ ಚಾಣಾಕ್ಯನೆನ್ನ ಬೇಕೆ? ಅತ್ತ ಕಡೆ ಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ  ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯ ಸಾಧನೆ ಮಾಡಿದ ಭೀಷ್ಮನೆ ?. ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರದ ದೇಶಭಕ್ತನೆ?.ಕೇವಲ ಭರತ  ಖಂಡಕ್ಕೆ ಅಲ್ಲದೆ ಇಡಿ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ವಿಶ್ವಮಾನವನೆನ್ನ ಬೇಕೆ ?..

ನಾ ಅರಿಯೇ.

ಮೇಲಿನ ಪೀಠಿಕೆ ನೋಡಿದರೆ ಬಹುಶಃ ಯಾರ ಬಗ್ಗೆ ಲೇಖನ ಅಂತ ನಿಮಗೆ ಅರಿವಿಗೆ ಬಂದಿರಬಹುದು. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹೆಸರು ಕೇಳಿರಬೇಕಲ್ಲ, ಇಂದು ಅವರ ಜನ್ಮ ದಿನ (ಸೆಪ್ಟೆಂಬರ್ ೧೫ ೧೮೬೧). ಭಾರತೀಯರೆಲ್ಲರೂ   ಇಂದು “ಅಭಿಯಂತರ ದಿನಾಚರಣೆ”  ಎಂದು ಆಚರಿಸುತ್ತೇವೆ.  ಸರ್ ಮ್ ವಿ  ಎಂದು ಹೇಳಿದಾಗ  ಶಿಸ್ತು , ದಕ್ಷತೆ , ವಿನಯತೆ , ಸಮಯ ಪಾಲನೆ, ನಿಪುಣತೆ, ನಿರಂಕುಶ ಆಡಳಿತ,  ಕರ್ತವ್ಯ ಪ್ರಜ್ಞೆ ಇನ್ನು ಹಲವು  ಪದಗಳು ನಮ್ಮ ಕಿವಿಗಳಿಗೆ  ಮಾರ್ದನಿಸುತ್ತದೆ. ಇಂದು ಸರ್ ಮ್ ವಿ  ಅವರ ಬಗ್ಗೆ  ನಿಮಗೆ ಗೊತ್ತಿರದ ಕೆಲವು ವಿಷಯಗಳನ್ನು ಹಂಚಿ ಕೊಳ್ಳಲು ಬಯಸುತ್ತೇನೆ.

ಪ್ರಾಮಾಣಿಕತೆ

ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಸರ್ ಮ್ ವಿ , ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಪೆನ್ನು,ಮೊಂಬತ್ತಿ , ಸ್ವಂತ ಕೆಲಸಕ್ಕೆ ಸ್ವಂತ ಕಾರು, ಪೆನ್ನು ಮೊಂಬತ್ತಿ. ಅಂದು ಸರ್ ಎಂ ವಿ ಯವರು ಮೈಸೂರಿನ ದಿವಾನರ ಹುದ್ದೆಗೆ ರಾಜೀನಾಮೆ ಕೂಡಲು ಮಹಾರಾಜರ ಹತ್ತಿರ ಹೋದಾಗ ಸರ್ಕಾರದ ಕಾರನ್ನು ಬಳಸಿ, ಹಿಂತಿರುಗಿ ಬರುವಾಗ ತಮ್ಮ ಖಾಸಗಿ ಕಾರಿನಲ್ಲಿ ಬಂದರು. ತಕ್ಕ್ಷಣವೆ ತಾವಿದ್ದ ಸರ್ಕಾರೀ ಬಂಗಲೆಯನ್ನು ತ್ಯಜಿಸಿದರು. ಸರ್ ಎಂ ವಿ ದಿವಾನರದಾಗ ಸರ್ಕಾರದ ಕೆಲಸದಲ್ಲಿ ಇದ್ದ ನೆಂಟರೊಬ್ಬರು ತಮಗೆ ಅದಕ್ಕಿಂತ ಮೇಲಿನ ಕೆಲಸ ಕೊಡಿಸಬೇಕೆಂದು ಕೇಳಿ ಕೊಂಡರು,ಅದಕ್ಕೆ ಆಗುವುದಿಲ್ಲ ಎಂದು ಅವರಿಗೆ ಹೇಳಿದರು. ಅ ಕೆಲಸ ಸಿಕ್ಕರೆ ಅವನಿಗೆ ೫೦ ರೊಪಾಯಿ ಹೆಚ್ಚು ಸಿಕ್ಕುತ್ತಿತ್ತು. ಅದ್ದರಿಂದ  ಅತ ಬದುಕಿರುವವರೆಗೆ ತಮ್ಮ ಸಂಬಳದಲ್ಲಿ ನೂರು ರೂಪಾಯಿಯನ್ನು ಆತನಿಗೆ ಕಳಿಸಿ ಕೊಡುತ್ತಿದ್ದರು.

ಸರಸ್ವತಿ ಪುತ್ರ

 ವಾರಾನ್ನ ಊಟ  ಮಾಡಿಕೊಂಡು , ಬೀದಿ ದೀಪದ ಕೆಳಗೆ ಓದುತ್ತಾ, ಬೇರೆಯ ಮಕ್ಕಳಿಗೆ ಪಾಠ ಹೇಳಿಕೊಡುತ್ತ ಮುಂದೆ ದೊಡ್ಡವರಾದ ಸರ್ ಎಂ ವಿ. ಮುಂದೆ  ಜನರ ಬಡತನ ಮತ್ತು ಕಷ್ಟಗಳಿಗೆ ಮೂಲ ಕಾರಣ ವಿದ್ಯೆ ಇಲ್ಲದಿರುವುದು ಎಂದು ಅರಿತು ಮೈಸೂರು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದರು. ಅಂದು ಅವರು ದಿವಾನರದಾಗ ಕೇವಲ ೪೫೦೦ ಸಾವಿರ ಶಾಲೆಗಳು ಇದ್ದವು, ಆರು ವರ್ಷಗಳಲ್ಲಿ ೬೫೦೦ ಶಾಲೆಗಳನ್ನು ತೆರೆದರು. ೧೪೦೦೦೦   ಮಕ್ಕಳು ದಿವಾನರದಾಗ ಓದುತ್ತಿದ್ದರೆ, ೩೬೬೦೦೦ ಮಕ್ಕಳು  ದಿವಾನಗಿರಿ ಬಿಡುವ ಹೊತ್ತಿಗೆ ಓದುತ್ತಿದ್ದರು. ಹೆಣ್ಣು ಮಕ್ಕಳಿಗೆ ಕಲಿಯಲು ಅನುಕೂಲಗಳನ್ನು ಹಲವು ಯೋಜನೆ ಮಾಡಿಕೊಟ್ಟರು, ವಿಧ್ಯಾರ್ಥಿನಿಯರಿಗೆ ಮೂದಲ ಬಾರಿಗೆ ಹಾಸ್ಟೆಲ್ ಕಟ್ಟಿಸಿದರು.ಇದು ಇಲ್ಲಿಗೆ ನಿಲ್ಲದೆ ದೇಶದ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ , ತಾಂತ್ರಿಕ ಮಹಾವಿದ್ಯಾಲಯ, ಕೃಷಿ ವಿದ್ಯಾಲಯ ಮತ್ತು ಪ್ರತಿ ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು.ಕನ್ನಡ ಭಾಷೆಯ ಅಭಿರುದ್ದಿ ಮತ್ತು ಕರ್ನಾಟಕದ ಏಕೀಕರಣಕಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು.

ಚಾಣಕ್ಯ

 ಅಂದು ಕೆಂಪು ಮೂತಿಗಳ ವಿರುದ್ದ ಭರತ ಖಂಡವೇ ಅಖಾಡಕ್ಕೆ ಇಳಿದಿತ್ತು. ಅತ್ತ ಕಡೆ ಮಂದಗಾಮಿಗಳು , ಇತ್ತ ಕಡೆ ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳು ಸ್ವತಂತ್ರ ಚಳುವಳಿಯಲ್ಲಿದುಮಿಕಿದ್ದರು. ಇವರೆಲ್ಲರನ್ನು ಮೀರಿಸಿ ತಮ್ಮದೇ ಒಂದು ವಿಶಿಷ್ಟ ರೀತಿಯ ಹೋರಾಟದಿಂದ ಭಾರತ ಮಾತೆಯನ್ನು ಮತ್ತೆ ಕೆಂಪು ಮೊತಿಗಳು ದೊಚದಂತೆ, ಅವರ ಸಹಾಯವನ್ನೇ ಬಳಸಿ ಭರತಖಂಡವನ್ನೇ ಸಂರುದ್ದಗೊಳಿಸಿದರು. ದೇಶಕ್ಕೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿದೇಶಗಳಿಂದ ಪಡೆದು ದೇಶವನ್ನು ಯಶಸ್ಸೆಂಬ ಪರ್ವದ ಕಡೆಗೆ ನಡೆಸಿದರು. ದೇಶದ ತುಂಬೆಲ್ಲನೀರಾವರಿ , ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳು, ಅಸಂಖ್ಯ ಕಾರ್ಖಾನೆಗಳು ,ಶಿಕ್ಷಣ ಕೇಂದ್ರಗಳು ಮತ್ತು ಅರ್ಥಿಕ ಸಲಹೆಗಳನ್ನು ಕೆಂಪು ಮೂತಿಗಳು ಇದ್ದ ಸಮಯದಲ್ಲಿ ನೀಡಿ ಚಾಣಕ್ಯನೆನಿಸಿ ಕೊಂಡರು.

ಕಲಿಯುಗದ ಭೀಷ್ಮ

 ಕೇವಲ ಆರು ವರ್ಷಗಲ್ಲಿ ಅಸಾಧಾರಣ ಪ್ರಗತಿ ತೋರಿಸಿದ ಸರ್ ಎಂ ವಿ ಸಹ ಪ್ರತೀ ಯೋಜನೆಯಲ್ಲಿ ಎಲ್ಲರಿಗಿಂತ ಹೆಚ್ಚು ವಿರೋಧಗಳನ್ನು ಅನುಭವಿಸಿ ಅದನ್ನೆಲ್ಲ ಮೆಟ್ಟಿ ನಿಂತು ತಮ್ಮ ಕಾರ್ಯ ಸಾಧನೆ ಮಾಡಿದ್ದರು ಅದಕ್ಕೊಂದು ಉದಾಹರಣೆ ನಮ್ಮ ಕನ್ನಂಬಾಡಿ ಕಟ್ಟೆ.ಅಣೆಕಟ್ಟು ಕಟ್ಟುವ  ಪ್ರಸ್ತಾಪವನ್ನು ಮಹಾರಾಜರ ಮುಂದೆ ಇಟ್ಟಾಗ ಸರ್ ಎಂ ವಿಗೆ ಆಗದವರು ಮಹಾರಾಜರಿಗೆ ಇದೊಂದು ಹುಚ್ಚು ಯೋಜನೆ ಎಂದು ಹೇಳಿ , ಅನುಮತಿ ನಿರಾಕರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸರ್ ಎಂ ವಿ  ರಾಜೀನಾಮೆ ಕೂಡುವ ನಿರ್ಧಾರವನ್ನು ಮಹಾರಾಜರ ಮುಂದೆ ಪ್ರಸ್ತಾಪಿಸಿದಾಗ, ಸ್ವಲ್ಪ ಸಮಯ ಕೊಡಿ ಎಂದು ಮಹಾರಾಜರು ಸಮಯ ಕೇಳಿ ನಂತರ ಅಣೆಕಟ್ಟಿಗೆ ಅನುಮತಿ ಕೊಟ್ಟರು.

ನಂತರ ಎದುರಾದುದು  ಮತ್ತೊಂದು ವಿಘ್ನ ಆಣೆಕಟ್ಟು ಕಟ್ಟಿದರೆ ಎಲ್ಲಿ ತಮಗೆ ನೀರು ಸಿಗುವುದಿಲ್ಲವೋ ಎಂದು ಅಂದು ಮದರಾಸ್ ಪ್ರಾಂತ್ಯ ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಅಡ್ಡಿ ಮಾಡಿತ್ತು. ಮುಕ್ಕಾಲು ಪಾಲು ಕಾವೇರಿ ನದಿ ಹರಿಯುವುದು ಕನ್ನಡ ನಾಡಿನಲ್ಲಿ ನಮಗಿಲ್ಲವೇ ಆದರ ಹಕ್ಕು ಎಂದು ಸರ್ ಎಂ ವಿ ಮಂಡಿಸಿದರು?. ಕೊನೆಗೆ ಭಾರತ ಸರ್ಕಾರ ೮೦ ಅಡಿಗೆ ಅಣೆಕಟ್ಟಲು ಅನುಮತಿ ನೀಡಿತು. ಆದರೆ ಸರ್ ಎಂ ವಿ ೧೩೦ ಅಡಿಗೆ ಆಣೆಕಟ್ಟು ಕಟ್ಟಲು ನೀಲನಕ್ಷೆ ಸಿದ್ದ ಮಾಡಿ ಕಾರ್ಯಾರಂಭ ಮಾಡಿದರು. ಕೊನೆಗೆ ಭಾರತ ಸರಕಾರದ ವಿರುದ್ದ ವಾದ ಮಾಡಿ ಮದರಾಸ್ ಪ್ರಾಂತ್ಯ ಇದರಿಂದ  ನಮಗಿಂತ ಜಾಸ್ತಿಯೇ ನೀರು ಸಿಕ್ಕುತ್ತದೆ ಎಂದು ಹೇಳಿ ಅನುಮತಿ ಪಡೆದು ಮುಂದೆ ಕನ್ನಂಬಾಡಿ  ಆಣೆಕಟ್ಟು ಕಟ್ಟಿದರು.

ಅರ್ಥಿಕ ತಜ್ಞ

 ಕೇವಲ ಇಂಜಿನಿಯರ್ ಆಗಿರದೆ ನಷ್ಟದಲ್ಲಿದ್ದ  ಮುಂಬೈ ಮತ್ತು  ಕರಾಚಿಯ ಪುರ ಸಭೆಗಳಿಗೆ ಸಲಹೆ ನೀಡಿ ಮತ್ತು ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ  ಕಾರ್ಖಾನೆಯನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡಿದರು. ಭವಿಷ್ಯದ ಭಾರತಕ್ಕೆ ಬೇಕಾದ ರೂಪು ರೇಷೆಗಳನ್ನು ಸಿದ್ದಪಡಿಸಿದರು. ಪ್ರತಿಯೊಂದು ಯೋಜನೆಯನ್ನು ನಿಗದಿತ ವೆಚ್ಛ ಮತ್ತು ಸಮಯದಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಿದರು. ಸುಭದ್ರ ದೇಶದ ಬೆನ್ನೆಲುಬು ದೇಶದ ಅರ್ಥಿಕ ಸ್ಥಿತಿ ಅದಕ್ಕಾಗಿ ಮೈಸೂರ್ ಬ್ಯಾಂಕಿನ ಸ್ಥಾಪನೆ ಮಾಡಿ.ಚೇಂಬರ್ ಆಫ್ ಕಾಮ್ಮೆರ್ಸೆ ಸಂಸ್ಥೆಯನ್ನು ಸ್ಥಾಪನೆ ಮಾಡಿದರು.ಬಡ ಕುಟುಂಬದಿಂದ ಬಂದ ಸರ್ ಎಂ ವಿ ದಿವಾನಗಿರಿ ಮಾಡುವಾಗಲು ಸಹ ಒಂದೊಂದು  ಪೈಸೆಯ ಬೆಲೆ ಅರಿತಿದ್ದರು ಎನ್ನುವುದಕ್ಕೆ ಅವರ ಬ್ಯಾಂಕಿನ ಖಾತೆಯೇ ಸಾಕ್ಷಿ.

ಮುಪ್ಪು ಕೇವಲ ದೇಹಕ್ಕೆ,  ಮನಸ್ಸಿಗೆ ಅಲ್ಲ..

 ೬೦ ಬಂತು ಅಂದರೆ ಅರಳು ಮರಳು ಅಂತಿವೆ ಆದರೆ ಅದಕ್ಕೆ ತದ್ವಿರುದ್ದ ನಮ್ಮ ಸರ್ ಎಂ ವಿ. ತಮ್ಮ ೭೫ನೇ  ವಯಸ್ಸಿನಲ್ಲಿ,  ಮಹಾನದಿಯ  ಪ್ರವಾಹದಿಂದ ತತ್ತರಿಸಿದ್ದ ಒರಿಸ್ಸಾದ ಜನತೆಗೆ, ಮುಂದಿನ ದಿನಗಳಲ್ಲಿ ಮುಂದೆಂದು ಪ್ರವಾಹಕ್ಕೆ ತತ್ತರಿಸದ ಹಾಗೆ ಸ್ಥಳ ಪರಿಶೀಲನೆ ಮಾಡಿ , ಮಹಾನದಿಗೆ ಅಡ್ಡಲಾಗಿ ಒರಿಸ್ಸಾದ ಹಿರಾಕುಡ್ನಲ್ಲಿ ಜಲಾಶಯ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ದಪಡಿಸಿದರು.೧೯೩೯, ಅಂದರೆ ಸರ್ ಎಂ ವಿಗೆ ೭೮ರ ಹರೆಯ ,ಅವರ ಬಹು ದಿನಗಳ  ಕನಸಾದ ವಾಹನ ತಯಾರಿಕೆಯ ಕಾರ್ಖಾನೆಯ ಯೋಜನೆಯ ಅನುಮೋದನೆ ಪಡೆದರು.  ಅ ಸಂಸ್ಥೆ ಮತ್ತಾವುದು ಅಲ್ಲ ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್.  ೧೯೫೩,ತಮ್ಮ  ೯೨ರ ಹರೆಯದಲ್ಲಿ ಬಿಹಾರದ ಪಾಟ್ನಾ ನಗರದ ಗಂಗಾ ನದಿಯ ಸೇತುವೆಗೆ ನೀಲ ನಕ್ಷೆ ತಯಾರಿಸಲು  ಯೋಜನೆ ಅನುಷ್ಟಾನ ಮಾಡುವ ಸ್ಥಳಕ್ಕೆ ಸುಡು ಬಿಸಿಲನು ಲೆಕ್ಕಿಸದೆ ನಡೆದೆ ಹೋಗಿ ಯೋಜನೆ ಸಿದ್ದ ಮಾಡಿದರು. ವಯಸ್ಸು ತೊಂಬತ್ತು  ದಾಟಿದರು ಮನೆಗೆ ಅತಿಥಿಗಳು  ಬಂದಾಗ ಎದ್ದು ನಿಂತು ಗೌರವ ಸೂಚಿಸಿ ಮಾತನಾಡಿಸುತ್ತಿದ್ದರು. ಹೊಸಪೇಟೆಯ  ತುಂಗಭದ್ರ ಅಣೆಕಟ್ಟಿಗೆ ಸಲಹೆ ನೀಡಿದಾಗ ೮೬ರ ಪ್ರಾಯ, ಹಾಗೆ ತಮ್ಮ ಆತ್ಮ ಚರಿತ್ರೆ ಬರೆದಾಗ ೯೧ನೇ ವಸಂತ ಕಂಡರು.

ಸರ್ ಎಂ ವಿಯವರಿಗೆ ಆಗ ನೂರರ ಸಂಭ್ರಮ ಮನೆಯಲ್ಲಿದ್ದ ಅವರ ನೆಂಟರು ನಾನು ಮದರಾಸಿಗೆ ಹೋಗುತ್ತಿದ್ದೇನೆ ನಿಮಗೆ ಏನಾದರು ತರಲೆ, ಆಗ ಸರ್ ಎಂ ವಿ “ ನನಗೆ ಒಂದು ಹೊಸ ಅಂಗ್ಲ ಶಬ್ದ ಕೋಶ ತಂದು ಕೋಡಿ ” ಎಂದು ಹೇಳಿದರು. ವಯಸ್ಸು ನೂರಾದರು ಬುದ್ದಿ ಇನ್ನು ಚಿರಯವ್ವನದಲ್ಲಿತ್ತು ನಮ್ಮ ಸರ್ ಎಂ ವಿ ಯವರದು.

ಕೊನೆ ಮಾತು ..

  ಅಧಿಕಾರ ಕೇವಲ ಅನುಭವಿಸಲು ಅಲ್ಲ, ಜನಕ್ಕಾಗಿ ಎಂದು ಅರಿತಿದ್ದ ಸರ್ ಎಂ ವಿ , ತಮ್ಮ ಬಹುಪಾಲು  ಸಮಯವನ್ನು ಜನರ ಸೇವೆಗೆ ಮೀಸಲಿಟ್ಟರು. ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಸಾಕು ಅದರ ಫಲ ತಡವಾದರೂ ಸಿಕ್ಕೆ ಸಿಗುತ್ತದೆ. ಸರ್ ಎಂ ವಿ ಒಂದು ಮಾತನ್ನು ಹೇಳುತ್ತಾರೆ. ಕೆಳಗೆ ಇರುವ ಸರ್ ಮ್ ವಿ ಯವರ ಹೇಳಿಕೆಯ ಮೂಲಕ  ನನ್ನ ಲೇಖನವನ್ನು ಮುಕ್ತಾಯಗೋಳಿಸುತ್ತೇನೆ.

“ಯಾವುದೇ ವೃತ್ತಿ ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ , ವ್ಯಕ್ತಿತ್ವ , ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನೂ ಅಧರಿಸುತ್ತವೆ. ಮನುಷ್ಯನ ಬದುಕಿನ ಯಶಸ್ಸಿಗೆ ಅವನ ಪರಿಶ್ರಮವೇ ಆಧಾರ  ಯಾವ ಮನುಷ್ಯನ ಬದುಕಿನ ಸಿದ್ದಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತಸ  ಅನುಭವಿಸುತ್ತದೆಯೋ  ಅತ ಅಪಯಶಸ್ಸುಗಳಿಸುವುದು ಸಿದ್ದ. ಸುಖ ದುಃಖಗಳೆರಡನ್ನು ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ದ ಸೂತ್ರ.”

Uncategorized

ಕಾಯಕ ಯೋಗಿಗೊಂದು ನಮನ

ಭರತ ಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ  ಇವರನ್ನು  ಭಗೀರಥನೆನ್ನ ಬೇಕೆ?.  ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರನೆನ್ನ  ಬೇಕೆ ?.  ಭರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಅಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿರುದ್ದಿಗೆ ಶ್ರಮಿಸಿದ ಚಾಣಾಕ್ಯನೆನ್ನ ಬೇಕೆ? ಅತ್ತ ಕಡೆ ಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ  ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯ ಸಾಧನೆ ಮಾಡಿದ ಭೀಷ್ಮನೆ ?. ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರದ ದೇಶಭಕ್ತನೆ?.ಕೇವಲ ಭರತ  ಖಂಡಕ್ಕೆ ಅಲ್ಲದೆ ಇಡಿ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ವಿಶ್ವಮಾನವನೆನ್ನ ಬೇಕೆ ?..

ನಾ ಅರಿಯೇ.

ಮೇಲಿನ ಪೀಠಿಕೆ ನೋಡಿದರೆ ಬಹುಶಃ ಯಾರ ಬಗ್ಗೆ ಲೇಖನ ಅಂತ ನಿಮಗೆ ಅರಿವಿಗೆ ಬಂದಿರಬಹುದು. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹೆಸರು ಕೇಳಿರಬೇಕಲ್ಲ, ಇಂದು ಅವರ ಜನ್ಮ ದಿನ (ಸೆಪ್ಟೆಂಬರ್ ೧೫ ೧೮೬೧). ಭಾರತೀಯರೆಲ್ಲರೂ   ಇಂದು “ಅಭಿಯಂತರ ದಿನಾಚರಣೆ”  ಎಂದು ಆಚರಿಸುತ್ತೇವೆ.  ಸರ್ ಮ್ ವಿ  ಎಂದು ಹೇಳಿದಾಗ  ಶಿಸ್ತು , ದಕ್ಷತೆ , ವಿನಯತೆ , ಸಮಯ ಪಾಲನೆ, ನಿಪುಣತೆ, ನಿರಂಕುಶ ಆಡಳಿತ,  ಕರ್ತವ್ಯ ಪ್ರಜ್ಞೆ ಇನ್ನು ಹಲವು  ಪದಗಳು ನಮ್ಮ ಕಿವಿಗಳಿಗೆ  ಮಾರ್ದನಿಸುತ್ತದೆ. ಇಂದು ಸರ್ ಮ್ ವಿ  ಅವರ ಬಗ್ಗೆ  ನಿಮಗೆ ಗೊತ್ತಿರದ ಕೆಲವು ವಿಷಯಗಳನ್ನು ಹಂಚಿ ಕೊಳ್ಳಲು ಬಯಸುತ್ತೇನೆ.

ಪ್ರಾಮಾಣಿಕತೆ

ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಸರ್ ಮ್ ವಿ , ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಪೆನ್ನು,ಮೊಂಬತ್ತಿ , ಸ್ವಂತ ಕೆಲಸಕ್ಕೆ ಸ್ವಂತ ಕಾರು, ಪೆನ್ನು ಮೊಂಬತ್ತಿ. ಅಂದು ಸರ್ ಎಂ ವಿ ಯವರು ಮೈಸೂರಿನ ದಿವಾನರ ಹುದ್ದೆಗೆ ರಾಜೀನಾಮೆ ಕೂಡಲು ಮಹಾರಾಜರ ಹತ್ತಿರ ಹೋದಾಗ ಸರ್ಕಾರದ ಕಾರನ್ನು ಬಳಸಿ, ಹಿಂತಿರುಗಿ ಬರುವಾಗ ತಮ್ಮ ಖಾಸಗಿ ಕಾರಿನಲ್ಲಿ ಬಂದರು. ತಕ್ಕ್ಷಣವೆ ತಾವಿದ್ದ ಸರ್ಕಾರೀ ಬಂಗಲೆಯನ್ನು ತ್ಯಜಿಸಿದರು. ಸರ್ ಎಂ ವಿ ದಿವಾನರದಾಗ ಸರ್ಕಾರದ ಕೆಲಸದಲ್ಲಿ ಇದ್ದ ನೆಂಟರೊಬ್ಬರು ತಮಗೆ ಅದಕ್ಕಿಂತ ಮೇಲಿನ ಕೆಲಸ ಕೊಡಿಸಬೇಕೆಂದು ಕೇಳಿ ಕೊಂಡರು,ಅದಕ್ಕೆ ಆಗುವುದಿಲ್ಲ ಎಂದು ಅವರಿಗೆ ಹೇಳಿದರು. ಅ ಕೆಲಸ ಸಿಕ್ಕರೆ ಅವನಿಗೆ ೫೦ ರೊಪಾಯಿ ಹೆಚ್ಚು ಸಿಕ್ಕುತ್ತಿತ್ತು. ಅದ್ದರಿಂದ  ಅತ ಬದುಕಿರುವವರೆಗೆ ತಮ್ಮ ಸಂಬಳದಲ್ಲಿ ನೂರು ರೂಪಾಯಿಯನ್ನು ಆತನಿಗೆ ಕಳಿಸಿ ಕೊಡುತ್ತಿದ್ದರು.

ಸರಸ್ವತಿ ಪುತ್ರ

 ವಾರಾನ್ನ ಊಟ  ಮಾಡಿಕೊಂಡು , ಬೀದಿ ದೀಪದ ಕೆಳಗೆ ಓದುತ್ತಾ, ಬೇರೆಯ ಮಕ್ಕಳಿಗೆ ಪಾಠ ಹೇಳಿಕೊಡುತ್ತ ಮುಂದೆ ದೊಡ್ಡವರಾದ ಸರ್ ಎಂ ವಿ. ಮುಂದೆ  ಜನರ ಬಡತನ ಮತ್ತು ಕಷ್ಟಗಳಿಗೆ ಮೂಲ ಕಾರಣ ವಿದ್ಯೆ ಇಲ್ಲದಿರುವುದು ಎಂದು ಅರಿತು ಮೈಸೂರು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದರು. ಅಂದು ಅವರು ದಿವಾನರದಾಗ ಕೇವಲ ೪೫೦೦ ಸಾವಿರ ಶಾಲೆಗಳು ಇದ್ದವು, ಆರು ವರ್ಷಗಳಲ್ಲಿ ೬೫೦೦ ಶಾಲೆಗಳನ್ನು ತೆರೆದರು. ೧೪೦೦೦೦   ಮಕ್ಕಳು ದಿವಾನರದಾಗ ಓದುತ್ತಿದ್ದರೆ, ೩೬೬೦೦೦ ಮಕ್ಕಳು  ದಿವಾನಗಿರಿ ಬಿಡುವ ಹೊತ್ತಿಗೆ ಓದುತ್ತಿದ್ದರು. ಹೆಣ್ಣು ಮಕ್ಕಳಿಗೆ ಕಲಿಯಲು ಅನುಕೂಲಗಳನ್ನು ಹಲವು ಯೋಜನೆ ಮಾಡಿಕೊಟ್ಟರು, ವಿಧ್ಯಾರ್ಥಿನಿಯರಿಗೆ ಮೂದಲ ಬಾರಿಗೆ ಹಾಸ್ಟೆಲ್ ಕಟ್ಟಿಸಿದರು.ಇದು ಇಲ್ಲಿಗೆ ನಿಲ್ಲದೆ ದೇಶದ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ , ತಾಂತ್ರಿಕ ಮಹಾವಿದ್ಯಾಲಯ, ಕೃಷಿ ವಿದ್ಯಾಲಯ ಮತ್ತು ಪ್ರತಿ ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು.ಕನ್ನಡ ಭಾಷೆಯ ಅಭಿರುದ್ದಿ ಮತ್ತು ಕರ್ನಾಟಕದ ಏಕೀಕರಣಕಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು.

ಚಾಣಕ್ಯ

 ಅಂದು ಕೆಂಪು ಮೂತಿಗಳ ವಿರುದ್ದ ಭರತ ಖಂಡವೇ ಅಖಾಡಕ್ಕೆ ಇಳಿದಿತ್ತು. ಅತ್ತ ಕಡೆ ಮಂದಗಾಮಿಗಳು , ಇತ್ತ ಕಡೆ ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳು ಸ್ವತಂತ್ರ ಚಳುವಳಿಯಲ್ಲಿದುಮಿಕಿದ್ದರು. ಇವರೆಲ್ಲರನ್ನು ಮೀರಿಸಿ ತಮ್ಮದೇ ಒಂದು ವಿಶಿಷ್ಟ ರೀತಿಯ ಹೋರಾಟದಿಂದ ಭಾರತ ಮಾತೆಯನ್ನು ಮತ್ತೆ ಕೆಂಪು ಮೊತಿಗಳು ದೊಚದಂತೆ, ಅವರ ಸಹಾಯವನ್ನೇ ಬಳಸಿ ಭರತಖಂಡವನ್ನೇ ಸಂರುದ್ದಗೊಳಿಸಿದರು. ದೇಶಕ್ಕೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿದೇಶಗಳಿಂದ ಪಡೆದು ದೇಶವನ್ನು ಯಶಸ್ಸೆಂಬ ಪರ್ವದ ಕಡೆಗೆ ನಡೆಸಿದರು. ದೇಶದ ತುಂಬೆಲ್ಲನೀರಾವರಿ , ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳು, ಅಸಂಖ್ಯ ಕಾರ್ಖಾನೆಗಳು ,ಶಿಕ್ಷಣ ಕೇಂದ್ರಗಳು ಮತ್ತು ಅರ್ಥಿಕ ಸಲಹೆಗಳನ್ನು ಕೆಂಪು ಮೂತಿಗಳು ಇದ್ದ ಸಮಯದಲ್ಲಿ ನೀಡಿ ಚಾಣಕ್ಯನೆನಿಸಿ ಕೊಂಡರು.

ಕಲಿಯುಗದ ಭೀಷ್ಮ

 ಕೇವಲ ಆರು ವರ್ಷಗಲ್ಲಿ ಅಸಾಧಾರಣ ಪ್ರಗತಿ ತೋರಿಸಿದ ಸರ್ ಎಂ ವಿ ಸಹ ಪ್ರತೀ ಯೋಜನೆಯಲ್ಲಿ ಎಲ್ಲರಿಗಿಂತ ಹೆಚ್ಚು ವಿರೋಧಗಳನ್ನು ಅನುಭವಿಸಿ ಅದನ್ನೆಲ್ಲ ಮೆಟ್ಟಿ ನಿಂತು ತಮ್ಮ ಕಾರ್ಯ ಸಾಧನೆ ಮಾಡಿದ್ದರು ಅದಕ್ಕೊಂದು ಉದಾಹರಣೆ ನಮ್ಮ ಕನ್ನಂಬಾಡಿ ಕಟ್ಟೆ.ಅಣೆಕಟ್ಟು ಕಟ್ಟುವ  ಪ್ರಸ್ತಾಪವನ್ನು ಮಹಾರಾಜರ ಮುಂದೆ ಇಟ್ಟಾಗ ಸರ್ ಎಂ ವಿಗೆ ಆಗದವರು ಮಹಾರಾಜರಿಗೆ ಇದೊಂದು ಹುಚ್ಚು ಯೋಜನೆ ಎಂದು ಹೇಳಿ , ಅನುಮತಿ ನಿರಾಕರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸರ್ ಎಂ ವಿ  ರಾಜೀನಾಮೆ ಕೂಡುವ ನಿರ್ಧಾರವನ್ನು ಮಹಾರಾಜರ ಮುಂದೆ ಪ್ರಸ್ತಾಪಿಸಿದಾಗ, ಸ್ವಲ್ಪ ಸಮಯ ಕೊಡಿ ಎಂದು ಮಹಾರಾಜರು ಸಮಯ ಕೇಳಿ ನಂತರ ಅಣೆಕಟ್ಟಿಗೆ ಅನುಮತಿ ಕೊಟ್ಟರು.

ನಂತರ ಎದುರಾದುದು  ಮತ್ತೊಂದು ವಿಘ್ನ ಆಣೆಕಟ್ಟು ಕಟ್ಟಿದರೆ ಎಲ್ಲಿ ತಮಗೆ ನೀರು ಸಿಗುವುದಿಲ್ಲವೋ ಎಂದು ಅಂದು ಮದರಾಸ್ ಪ್ರಾಂತ್ಯ ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಅಡ್ಡಿ ಮಾಡಿತ್ತು. ಮುಕ್ಕಾಲು ಪಾಲು ಕಾವೇರಿ ನದಿ ಹರಿಯುವುದು ಕನ್ನಡ ನಾಡಿನಲ್ಲಿ ನಮಗಿಲ್ಲವೇ ಆದರ ಹಕ್ಕು ಎಂದು ಸರ್ ಎಂ ವಿ ಮಂಡಿಸಿದರು?. ಕೊನೆಗೆ ಭಾರತ ಸರ್ಕಾರ ೮೦ ಅಡಿಗೆ ಅಣೆಕಟ್ಟಲು ಅನುಮತಿ ನೀಡಿತು. ಆದರೆ ಸರ್ ಎಂ ವಿ ೧೩೦ ಅಡಿಗೆ ಆಣೆಕಟ್ಟು ಕಟ್ಟಲು ನೀಲನಕ್ಷೆ ಸಿದ್ದ ಮಾಡಿ ಕಾರ್ಯಾರಂಭ ಮಾಡಿದರು. ಕೊನೆಗೆ ಭಾರತ ಸರಕಾರದ ವಿರುದ್ದ ವಾದ ಮಾಡಿ ಮದರಾಸ್ ಪ್ರಾಂತ್ಯ ಇದರಿಂದ  ನಮಗಿಂತ ಜಾಸ್ತಿಯೇ ನೀರು ಸಿಕ್ಕುತ್ತದೆ ಎಂದು ಹೇಳಿ ಅನುಮತಿ ಪಡೆದು ಮುಂದೆ ಕನ್ನಂಬಾಡಿ  ಆಣೆಕಟ್ಟು ಕಟ್ಟಿದರು.

ಅರ್ಥಿಕ ತಜ್ಞ

 ಕೇವಲ ಇಂಜಿನಿಯರ್ ಆಗಿರದೆ ನಷ್ಟದಲ್ಲಿದ್ದ  ಮುಂಬೈ ಮತ್ತು  ಕರಾಚಿಯ ಪುರ ಸಭೆಗಳಿಗೆ ಸಲಹೆ ನೀಡಿ ಮತ್ತು ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ  ಕಾರ್ಖಾನೆಯನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡಿದರು. ಭವಿಷ್ಯದ ಭಾರತಕ್ಕೆ ಬೇಕಾದ ರೂಪು ರೇಷೆಗಳನ್ನು ಸಿದ್ದಪಡಿಸಿದರು. ಪ್ರತಿಯೊಂದು ಯೋಜನೆಯನ್ನು ನಿಗದಿತ ವೆಚ್ಛ ಮತ್ತು ಸಮಯದಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಿದರು. ಸುಭದ್ರ ದೇಶದ ಬೆನ್ನೆಲುಬು ದೇಶದ ಅರ್ಥಿಕ ಸ್ಥಿತಿ ಅದಕ್ಕಾಗಿ ಮೈಸೂರ್ ಬ್ಯಾಂಕಿನ ಸ್ಥಾಪನೆ ಮಾಡಿ.ಚೇಂಬರ್ ಆಫ್ ಕಾಮ್ಮೆರ್ಸೆ ಸಂಸ್ಥೆಯನ್ನು ಸ್ಥಾಪನೆ ಮಾಡಿದರು.ಬಡ ಕುಟುಂಬದಿಂದ ಬಂದ ಸರ್ ಎಂ ವಿ ದಿವಾನಗಿರಿ ಮಾಡುವಾಗಲು ಸಹ ಒಂದೊಂದು  ಪೈಸೆಯ ಬೆಲೆ ಅರಿತಿದ್ದರು ಎನ್ನುವುದಕ್ಕೆ ಅವರ ಬ್ಯಾಂಕಿನ ಖಾತೆಯೇ ಸಾಕ್ಷಿ.

ಮುಪ್ಪು ಕೇವಲ ದೇಹಕ್ಕೆ,  ಮನಸ್ಸಿಗೆ ಅಲ್ಲ..

 ೬೦ ಬಂತು ಅಂದರೆ ಅರಳು ಮರಳು ಅಂತಿವೆ ಆದರೆ ಅದಕ್ಕೆ ತದ್ವಿರುದ್ದ ನಮ್ಮ ಸರ್ ಎಂ ವಿ. ತಮ್ಮ ೭೫ನೇ  ವಯಸ್ಸಿನಲ್ಲಿ,  ಮಹಾನದಿಯ  ಪ್ರವಾಹದಿಂದ ತತ್ತರಿಸಿದ್ದ ಒರಿಸ್ಸಾದ ಜನತೆಗೆ, ಮುಂದಿನ ದಿನಗಳಲ್ಲಿ ಮುಂದೆಂದು ಪ್ರವಾಹಕ್ಕೆ ತತ್ತರಿಸದ ಹಾಗೆ ಸ್ಥಳ ಪರಿಶೀಲನೆ ಮಾಡಿ , ಮಹಾನದಿಗೆ ಅಡ್ಡಲಾಗಿ ಒರಿಸ್ಸಾದ ಹಿರಾಕುಡ್ನಲ್ಲಿ ಜಲಾಶಯ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ದಪಡಿಸಿದರು.೧೯೩೯, ಅಂದರೆ ಸರ್ ಎಂ ವಿಗೆ ೭೮ರ ಹರೆಯ ,ಅವರ ಬಹು ದಿನಗಳ 
ಕನಸಾದ ವಾಹನ ತಯಾರಿಕೆಯ ಕಾರ್ಖಾನೆಯ ಯೋಜನೆಯ ಅನುಮೋದನೆ ಪಡೆದರು.  ಅ ಸಂಸ್ಥೆ ಮತ್ತಾವುದು ಅಲ್ಲ ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್.  ೧೯೫೩,ತಮ್ಮ  ೯೨ರ ಹರೆಯದಲ್ಲಿ ಬಿಹಾರದ ಪಾಟ್ನಾ ನಗರದ ಗಂಗಾ ನದಿಯ ಸೇತುವೆಗೆ ನೀಲ ನಕ್ಷೆ ತಯಾರಿಸಲು  ಯೋಜನೆ ಅನುಷ್ಟಾನ ಮಾಡುವ ಸ್ಥಳಕ್ಕೆ ಸುಡು ಬಿಸಿಲನು ಲೆಕ್ಕಿಸದೆ ನಡೆದೆ ಹೋಗಿ ಯೋಜನೆ ಸಿದ್ದ ಮಾಡಿದರು. ವಯಸ್ಸು ತೊಂಬತ್ತು  ದಾಟಿದರು ಮನೆಗೆ ಅತಿಥಿಗಳು  ಬಂದಾಗ ಎದ್ದು ನಿಂತು ಗೌರವ ಸೂಚಿಸಿ ಮಾತನಾಡಿಸುತ್ತಿದ್ದರು. ಹೊಸಪೇಟೆಯ  ತುಂಗಭದ್ರ ಅಣೆಕಟ್ಟಿಗೆ ಸಲಹೆ ನೀಡಿದಾಗ ೮೬ರ ಪ್ರಾಯ, ಹಾಗೆ ತಮ್ಮ ಆತ್ಮ ಚರಿತ್ರೆ ಬರೆದಾಗ ೯೧ನೇ ವಸಂತ ಕಂಡರು.

ಸರ್ ಎಂ ವಿಯವರಿಗೆ ಆಗ ನೂರರ ಸಂಭ್ರಮ ಮನೆಯಲ್ಲಿದ್ದ ಅವರ ನೆಂಟರು ನಾನು ಮದರಾಸಿಗೆ ಹೋಗುತ್ತಿದ್ದೇನೆ ನಿಮಗೆ ಏನಾದರು ತರಲೆ, ಆಗ ಸರ್ ಎಂ ವಿ “ ನನಗೆ ಒಂದು ಹೊಸ ಅಂಗ್ಲ ಶಬ್ದ ಕೋಶ ತಂದು ಕೋಡಿ ” ಎಂದು ಹೇಳಿದರು. ವಯಸ್ಸು ನೂರಾದರು ಬುದ್ದಿ ಇನ್ನು ಚಿರಯವ್ವನದಲ್ಲಿತ್ತು ನಮ್ಮ ಸರ್ ಎಂ ವಿ ಯವರದು.

ಕೊನೆ ಮಾತು ..

  ಅಧಿಕಾರ ಕೇವಲ ಅನುಭವಿಸಲು ಅಲ್ಲ, ಜನಕ್ಕಾಗಿ ಎಂದು ಅರಿತಿದ್ದ ಸರ್ ಎಂ ವಿ , ತಮ್ಮ ಬಹುಪಾಲು  ಸಮಯವನ್ನು ಜನರ ಸೇವೆಗೆ ಮೀಸಲಿಟ್ಟರು. ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಸಾಕು ಅದರ ಫಲ ತಡವಾದರೂ ಸಿಕ್ಕೆ ಸಿಗುತ್ತದೆ. ಸರ್ ಎಂ ವಿ ಒಂದು ಮಾತನ್ನು ಹೇಳುತ್ತಾರೆ.
ಕೆಳಗೆ ಇರುವ ಸರ್ ಮ್ ವಿ ಯವರ ಹೇಳಿಕೆಯ ಮೂಲಕ  ನನ್ನ ಲೇಖನವನ್ನು ಮುಕ್ತಾಯಗೋಳಿಸುತ್ತೇನೆ.

“ಯಾವುದೇ ವೃತ್ತಿ ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ , ವ್ಯಕ್ತಿತ್ವ , ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನೂ ಅಧರಿಸುತ್ತವೆ. ಮನುಷ್ಯನ ಬದುಕಿನ ಯಶಸ್ಸಿಗೆ ಅವನ ಪರಿಶ್ರಮವೇ ಆಧಾರ  ಯಾವ ಮನುಷ್ಯನ ಬದುಕಿನ ಸಿದ್ದಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತಸ 
ಅನುಭವಿಸುತ್ತದೆಯೋ  ಅತ ಅಪಯಶಸ್ಸುಗಳಿಸುವುದು ಸಿದ್ದ. ಸುಖ ದುಃಖಗಳೆರಡನ್ನು ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ದ ಸೂತ್ರ.”

ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಪೀರ್ ಅಂಡ್ ಸಬಾರ್ಡಿನೆಟ್

ಒಬ್ಬ ಹುಡುಗ ಸಿವಿಲ್ ಇಂಜಿನಿಯರಿಂಗ್ ಅನ್ನು  ಅತ್ತ್ಯುತ್ತಮ ದರ್ಜೆಯಲ್ಲಿ ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ಮುಗಿಸಿದ. ವಿಶ್ವವಿದ್ಯಾನಿಲಯಕ್ಕೆ ಅಗ್ರ ಶ್ರೇಯಾಂಕ ಪಡೆದುದರಿಂದ, ಸರ್ಕಾರದ ಲೋಕಪಯೋಗಿ ಇಲಾಖೆಯಲ್ಲಿ ತಕ್ಷಣ ಕೆಲಸ ಸಿಕ್ಕಿತು.
ಅವನಿಗೆ ನೀರಾವರಿ ಕಾಲುವೆಗಳ ಉಸ್ತುವಾರಿಯ ಕೆಲಸ ನಿಗದಿ ಪಡಿಸಿದರು. ತರುಣ ಇಂಜಿನಿಯರ್ ಜಾಣ್ಮೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತಿದ್ದ.

ಒಮ್ಮೆ ಒಂದು ನದಿಯ ಅಡ್ಡಲಾಗಿ ಒಂದು ಸಿಫನ್(Syphon) ಇಂದ ಕಾಲುವೆಗೆ ನೀರು ಹರಿಸುವ ಯೋಜನೆ ನೀಡಿದರು.ಯೋಜನೆ ಆರಂಭಿಸಲು ಪ್ರತಿಕೂಲ ಹವಾಮಾನ ಇದ್ದುದರಿಂದ  ಅ ತರುಣ  ಇಂಜಿನಿಯರ್  ಎಲ್ಲವನ್ನು ಕೊಲಂಕುಷವಾಗಿ ಪರೀಕ್ಷಿಸಿ. ತನ್ನ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ  ಈಗ ಕೆಲಸ ಆರಂಭ ಮಾಡುವುದು ಬೇಡ ವೆಚ್ಹ ಹೆಚ್ಚಾಗುತ್ತದೆ ಎಂದು ಯೋಚಿಸಿ  ಒಂದು ವರದಿಯನ್ನು ತನ್ನ ಮೇಲಿನ ಅಧಿಕಾರಿಗೆ  ಕೊಟ್ಟ.

ಅದಕ್ಕವನ ಮೇಲಿನ ಅಧಿಕಾರಿ , ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡ ಎಂದು ಅಪ್ಪಣೆ ಮಾಡಿ. ತನ್ನ ಪತ್ರದಲ್ಲಿ ತರುಣ ಇಂಜಿನಿಯರ್ ಅನ್ನು  ಕುರಿತು  ಹೀಗೆ ಬರೆದಿದ್ದ ”  ಅಜ್ಞಾಪಾಲನ, ಅವಿಧೇಯತೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ಅದಕ್ಷ ನಡತೆಯೊಂದಿಗೆ ಸದರಿ ಇಂಜಿನಿಯರ್ ತಮ್ಮ ವೃತ್ತಿ ಜೀವನವನ್ನು ಕೆಟ್ಟ ರೀತಿಯಲ್ಲಿ ಪ್ರಾರಂಭಿಸುತ್ತಿದ್ದಾನೆ “.

ಆಮೇಲೆ ತರುಣ ಇಂಜಿನಿಯರ್ ” ನಾನು ಕೆಲಸ ಮಾಡುವಾಗ ಯಾವುದೇ  ಅಡಚಣೆಗಳು ಉಂಟಾಗದೇ ಇದ್ದಲ್ಲಿ  , ಕಡಿಮೆ ವೆಚ್ಚದಲ್ಲಿ ಯೋಜನೆ ಮುಗಿಸಲು ಪ್ರಯತ್ನಿಸುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ   ಅನಿವಾರ್ಯವಾಗಿ ಅಂದಾಜಿಗಿಂತ ಹೆಚ್ಚು ಖರ್ಚಾದರೆ ತಾವು ಅಪೇಕ್ಷಿಸುವುದಿಲ್ಲವೆಂದು ನಿರೀಕ್ಷಿಸುತ್ತೇನೆ  ” ಎಂದು ಪತ್ರ ಬರೆದ. ಕೊನೆಗೆ ೨ ತಿಂಗಳ ಅವಧಿಯಲ್ಲಿ ಯೋಜನೆ ಮುಗಿಸಿದ.

ಅ ದಿನ ಏನಾದರು ಅ ತರುಣ ಇಂಜಿನಿಯರ್ ನಾನು ಮಾಡುವುದಿಲ್ಲ ಹೇಳಿದ್ದರೆ . ಸಲ್ಲದ  ಆರೋಪಗಳನ್ನೆಲ್ಲ ಮಾಡಿ ಮುಂದೆ ಅವನಿಗೆ ಎಲ್ಲಿಯೋ ಕೆಲಸ ಸಿಗದ ಹಾಗೆ ನೋಡಿ ಕೊಳ್ಳುತ್ತಿದ್ದ. ಯಾಕಂದರೆ ಇದು ನಡೆದು ಆಂಗ್ಲರ ಆಳ್ವಿಕೆಯ ಕಾಲದಲ್ಲಿ.

ಅ ಹುಡುಗ ಮತ್ತಾರು ಅಲ್ಲ “ಮೋಕ್ಷಗುಂಡಂ ವಿಶ್ವೇಶ್ವರಯ್ಯ”.

ಅಂದು ಏನಾದರು ಸರ್ ಮ್ ವಿ , ಕೆಲಸ ಆಗದು ಎಂದು ಹೇಳಿದ್ದರೆ, ಏನಾಗುತ್ತಿತು ಅಂತ ಹೇಳುವುದು ಊಹೆಗೆ ನಿಲುಕದ್ದು.

ಏನೇ ಅನ್ನಿ  ಆಂಗ್ಲರು , ಪರ್ಶಿಯಯನ್ನರು ,ಮೊಘಲರು   ನಮ್ಮ ದೇಶ ಆಳಿ ಸುಮಾರು ವರ್ಷಗಳು ಉರುಳಿವೆ. ಆದರು ಅವರ ಛಾಯೆ ಇನ್ನು ನಮ್ಮ ದೇಶದ ಬುದ್ದಿವಂತ ಅಧಿಕಾರಿಗಳಲ್ಲಿ ಇನ್ನು ಕಾಣಬಹುದು.

ಈ ಕತೆ ಹೆಚ್ಚಾಗಿ ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒಪ್ಪುತ್ತದೆ ಎನ್ನುವ ಅಭಿಪ್ರಾಯ ನನ್ನದು.