Uncategorized

ವಿಸ್ಮಯ ಜಗತ್ತು – ೧೦ – ನಾವು ಮನುಷ್ಯರಗಿಂತ ಏನು ಕಮ್ಮಿಯಿಲ್ಲ

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವ ನುಡಿಗಟ್ಟು ನಿಮಗೆಲ್ಲ ತಿಳಿದಿದೆಯಲ್ಲ.  ಹೊಟ್ಟೆ ಮತ್ತು ಬಟ್ಟೆಗಾಗಿ ಕೆಲವರು ಕಷ್ಟ ಪಟ್ಟು ದುಡಿದರೆ ಮತ್ತೆ ಕೆಲವರು ಮೋಸ, ವಂಚನೆ  ಮಾಡಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಾರೆ.  ಈ ಸ್ವಾರ್ಥ ಮನೋಭಾವ ಕೇವಲ ಮಾನವನಲ್ಲಿ ಮಾತ್ರ ಅಂತ ನೀವು ನಂಬಿದ್ದರೆ ಅದು ಖಂಡಿತ ಸುಳ್ಳು ಅದು ಪ್ರಾಣಿ ಪಕ್ಷಿಗಳಲ್ಲೋ ಸಹ ಕಂಡು ಬರುತ್ತದೆ.  ಕಳ್ಳತನ, ಮೋಸ,ವಂಚನೆಗಳು ಕಾನೂನು ಬಾಹಿರ ಚಟುವಟಿಕೆಯಾದರು ಕೆಲವೊಮ್ಮೆ ಅನಿಸುತ್ತದೆ ಸಹ ಪ್ರಕೃತಿಯ ನಿಮಯವೆಂದು.

ನರಿ 
ನರಿ ಬುದ್ದಿ ಅಂತ ಮೋಸ ,ವಂಚನೆ,ಕುತಂತ್ರ ಮಾಡುವ ಮಾನವರಿಗೆ ನಾವು ಹೊಲಿಸುತ್ತೇವೆ. ನರಿ ಬಿಟ್ಟು ಬೇರೆ ಪ್ರಾಣಿನೇಕೆ ನಾವು ಹೋಲಿಸುವುದಿಲ್ಲ. ನರಿ ಹೇಗೆ ಮೋಸ ಮಾಡುತ್ತೆ ಅಂತ ಇಂದು ತಿಳಿದು ಕೊಳ್ಳೋಣ. ನಿಮಗೆಲ್ಲ ತಿಳಿದಿರು ಹಾಗೆ ನರಿ ತನ್ನ ಆಹಾರಕ್ಕಾಗಿ  ಇತರೆ ಸಸ್ಯಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು , ಅವುಗಳ ಮರಿ ಮತ್ತು ಮೊಟ್ಟೆಗಳನ್ನ ತಿನ್ನುತ್ತದೆ.
ನರಿ ತನ್ನ ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳಿಗೆ ಮಾಡುವ ಕೆಲಸ ನಿಜಕ್ಕೂ ಪ್ರಕೃತಿಯ ನಿಮಯಮವೇ ಅಥವಾ   ಮೋಸವೇ ಅಂತ ನೀವು ತೀರ್ಮಾನ ಮಾಡಬೇಕು.

ಉಷ್ಟ್ರ ಪಕ್ಷಿಗಳ ಮೊಟ್ಟೆ ಸಹಜವಾಗಿ ಗಾತ್ರದಲ್ಲಿ ದೊಡ್ಡವು. ಉಷ್ಟ್ರ ಪಕ್ಷಿ ತನ್ನ ಮೊಟ್ಟೆಗಳ ರಕ್ಷಣೆ ಸದಾ ಮಾಡುತ್ತಿರುತ್ತದೆ. ಒಮ್ಮೆ ಏನಾದರೂ ಅದು ಎದ್ದು ಓಡಾಡಿದರೆ. ಅಲ್ಲೇ ಇದ್ದು ಹೊಂಚು ಹಾಕುತ್ತಿದ್ದ ನರಿ ತಕ್ಷಣವೇ ಮೊಟ್ಟೆಯನ್ನು ಕಚ್ಚಿಕೊಂಡು ಪಲಾಯನ ಮಾಡುತ್ತದೆ.

ಕೋಗಿಲೆ  
ಕೋಗಿಲೆ ಎಷ್ಟು ಇಂಪಾಗಿ ಹಾಡುತ್ತೋ ಅಷ್ಟೇ ಕುತಂತ್ರಿ  ಮತ್ತು ಸ್ವಾರ್ಥಿ ಕೂಡ, ಕೋಗಿಲೆ ತನ್ನ ಮೊಟ್ಟೆಗಳನ್ನು ಬೇರೆ ಪಕ್ಷಿಗಳ ಗೋಡುಗಳಲ್ಲಿ ಇಡುತ್ತದೆ. ಬರಿ ಮೊಟ್ಟೆ ಇಟ್ಟರೆ ಪರವಾಗಿಲ್ಲ ಅ ಪಕ್ಷಿಯ ಮೊಟ್ಟೆಗಳನ್ನು ಗೋಡಿನಿಂದ ಬಿಸಾಕುತ್ತದೆ. ಬೇರೆ ಪಕ್ಷಿ ತನ್ನ ಮೊಟ್ಟೆಗಳೆಂದು ಕಾವು ಕೊಟ್ಟು ಮರಿ ಮಾಡಿದರೆ ಮುಂದೆ ಕೋಗಿಲೆ ಮರಿಗಳು ಮೋಸ ಮಾಡುವಲ್ಲಿ ತಾಯಿಯನ್ನೇ ಅನುಕರಣೆ ಮಾಡಿ, ಅವು ಬೇರೆ ಪಕ್ಷಿಯ ಮರಿಗಳನ್ನು ಗೋಡಿನಿಂದ ಹೊರಹಾಕಿ ತಾವು ಸಮೃದ್ದವಾಗಿ ಬೆಳೆಯುತ್ತವೆ.

ಮಂಗ/ಕಪಿ

ಹಿಂದೆ ಮಂಗನಿಗೂ ಮಾನವನಿಗೂ ವ್ಯತ್ಯಾಸ ಇತ್ತು ಅಂತ ಹೇಳುತಾ ಇದ್ದರು, ಆದರೆ ವ್ಯತ್ಯಾಸ ಏನು ಇಲ್ಲ ಬಿಡಿ ಇಬ್ಬರು ಒಂದೆನೇ. ಪ್ಲಾನೆಟ್ ಆಫ್ ಏಪ್ಸ್ ಚಲನ ಚಿತ್ರದಲ್ಲಿ ಮಂಗ ಹೇಗೆ ಬಂಧನದಿಂದ ತಪ್ಪಿಸಿಕೊಂಡು ಹೋಗುವುದು ಹಾಗೆ ನಿಜ ಜೀವನದಲ್ಲಿ ಸಹ ಮೃಗಾಲಯದಲ್ಲಿ ಆಗಾಗ ಬೋನಿನ ಚೀಲಕ ತಗೆದು ಮೃಗಾಲಯದ ಅಧಿಕಾರಿಗಳಿಗೂ ಚಳ್ಳೆ ಹಣ್ಣು ತಿನ್ನಿಸುವುದು ಉಂಟು.

ಕೈಯಲ್ಲಿ ತಿನ್ನುವ ಪದಾರ್ಥಗಳನ್ನು ಇಟ್ಟು ಕೊಂಡು ಮಂಗಗಳು ಇರುವ ಕಡೆಗೆ ಒಮ್ಮೆ ಭೇಟಿ ಕೊಡಿ. ನೀವು ಅವುಗಳಿಗೆ ಎಷ್ಟು ಕೊಟ್ಟರು ಅವು ನಿಮ್ಮನ್ನು ಹಿಂಬಾಲಿಸಿ ಮತ್ತಷ್ಟು ಕೊಡುವವರೆಗೂ ಬಿಡುವುದಿಲ್ಲ. ಇಲ್ಲದಿದ್ದರೆ ಬಲವಂತವಾಗಿ ನಿಮ್ಮಿಂದ ಕಿತ್ತುಕೊಂಡು ಪರಾರಿಯಗುತ್ತವೆ. ನಮ್ಮ ಪೂರ್ವಜರು ಮಾಡಿದ್ದು ಹೊಟ್ಟೆಗಾಗಿ ತಾನೇ.

ವಿರ್ಜಿನಿಯ ಒಪ್ಪಸಂ
ಕೆಲವೊಂದು ಸಿಕ್ಕಿಬೀಳುವ ಸಂದರ್ಭದಲ್ಲಿ  ಮಾನವರು ಏನು ಆಘಾತ ಆದವರಂತೆ ನಾಟಕ ಮಾಡುತ್ತಾರೆ. ವಿರ್ಜಿನಿಯ ಒಪ್ಪಸಂ ಎನ್ನುವ ಇಲಿ ಗಾತ್ರದ ಪ್ರಾಣಿ ಸಹ ನಟನೆ ಮಾಡುತ್ತದೆ. ತನಗೆ ಅಪಾಯ ಎದುರಾದರೆ ತಾನು ಸತ್ತಂತೆ ನಾಟಕ ಮಾಡುತ್ತದೆ. ಕೇವಲ ಸತ್ತರೆ ಸಾಲದೇ ಸತ್ತ ಪ್ರಾಣಿಗಳ ದೇಹದಿಂದ ಬರುವ ದುರ್ಗಂಧವನ್ನು ಸಹ ಸೂಸುತ್ತದೆ. ಇದನ್ನು ಅರಿಯಾದ ಇತರೆ ಪ್ರಾಣಿಗಳು  ವಿರ್ಜಿನಿಯ ಒಪ್ಪಸಂ ಸತ್ತಿದೆ ಎಂದು ಭಾವಿಸುತ್ತಾರೆ.

ಕಂಬಳಿ ಹುಳ
ಪರಿಸರದಲ್ಲಿರುವ ತನ್ನ ವಾಸ ಸ್ಥಳಕ್ಕೆ ತಕ್ಕಂತೆ ತನ್ನ ದೇಹವನ್ನು ಹೊಂದಿಸುವ ತಾಕತ್ತು ಒಂದು ಜಾತಿಯ ಕಂಬಳಿ ಹುಳಗಳಿಗೆ ಇವೆ. ಹೆಚ್ಚಾಗಿ ಒಣಗಿದ ಗಿಡ,ಎಲೆ, ಹೂವು ಇತರೆ ಭಾಗಗಳನ್ನು ಹೋಲುವಂತೆ ತಟಸ್ಥವಾಗುತ್ತವೆ. ಆಗ ನಮಗೆ ಅವು ಅ ಸಸ್ಯದ ಭಾಗವೆಂದು ಮಾನವನೂ ಸೇರಿ ಇತರೆ ಜೀವಿಗಳು ಮೋಸ ಹೋಗುತ್ತವೆ.

ಗೋಸುಂಬೆ

ಸಮಯಕ್ಕೆ ತಕ್ಕಂತೆ ತಾನು ಆಡಿದ ಮಾತನ್ನು ಬದಲಿಸುವ ತಾಕತ್ತು ಕೇವಲ ಮಾನವನಿಗೆ ಮಾತ್ರವಿದೆ. ಇಂತವರು ಹೆಚ್ಚಾಗಿ ಸ್ವಾರ್ಥಿಗಳು ಕೇವಲ ತಮ್ಮ ಕಾರ್ಯ ಸಾಧನೆಗೆ ಇತರರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಮಾನವನ ಈ ನಡುವಳಿಕೆಗೆಗೆ  ನಾವು ಆಗಾಗ ಹೇಳುತ್ತೇವೆ ಗೋಸುಂಬೆ ಹಾಗೆ ಬಣ್ಣ ಬದಲಿಸ ಬೇಡ ಎಂದು. ಪಾಪ ಗೋಸುಂಬೆಗೆ ಪ್ರಕೃತಿ ನೀಡಿದ ವರ ಅದು ಆದರೆ ಮಾನವನಿಗೆ?

ಗೋಸುಂಬೆ ತನ್ನ ಶತ್ರುಗಳಿಗೆ ವಂಚಿಸಲು ಹಾಗು ತನ್ನ ಆಹಾರಕ್ಕಾಗಿ ತನ್ನ ಬಣ್ಣ ಬದಲಿಸುತ್ತಾ ಇರುತ್ತದೆ. ಗೋಸುಂಬೆಯ ನಾಲಿಗೆಯು ತನ್ನ ದೇಹದ ಅಕಾರಕ್ಕಿಂತ ಎರಡು ಪಟ್ಟು ದೊಡ್ಡದು ಇದೆ. ಗೋಸುಂಬೆ ತುಂಬಾ ಸಿಟ್ಟಾದಾಗ ತನ್ನ ದೇಹದ ಬಣ್ಣವನ್ನು ಕೆಂಪು ಬಣ್ಣಕ್ಕೆ ತಿರುಗಿಸಿ ಬಿಡುತ್ತದೆ. ನಮಗೂ ಈ ರೀತಿ ಪವರ್ ಇದ್ದರೆ ಎಷ್ಟು ಸೂಪರ್ ಇರುತಿತ್ತು ಅಲ್ವಾ .

ಸಧ್ಯಕ್ಕೆ ಏನೆ ಅನ್ನಿ ವಂಚಿಸುವುದರಲ್ಲಿ ಮಾನವನನ್ನು ಮಿರಿಸಲು ಮತ್ತೊಂದು ಜೀವಿಗಂತೋ ಸಾಧ್ಯವಿಲ್ಲ. ಮುಂದೆ ಏನಾದರು  ಪರಿಸ್ಥಿತಿ ಉಲ್ಟಾ ಹೊಡೆದರು ಅನುಮಾನವಿಲ್ಲ. ಯಾಕಂದರೆ ಬದಲಾವಣೆಯೇ ಪ್ರಕೃತಿಯ ನಿಯಮ.

Leave a comment